ಕನಿಕರ ಎಂಬುದು ತುಂಬಾ ಭಾವನಾತ್ಮಕವಾದ ಪದವಾಗಿದೆ. ತಂದೆತಾಯಿಗೂ ಅವರ ಮಗುವಿಗೂ ನಡುವೆಯಿರುವ ಬಲವಾದ ಸಂಬಂಧವನ್ನು ವ್ಯಕ್ತಪಡಿಸಲು ಈ ಪದವನ್ನು ಬಳಸುತ್ತಾರೆ. ಈ ವೀಡಿಯೊದಲ್ಲಿ, ಈ ಅಮೂಲ್ಯವಾದ ಇಬ್ರಿಯ ಪದದ ಕುರಿತು ನಾವು ನೋಡಿಕೊಳ್ಳೋಣ. ವಿಮೋಚನಕಾಂಡ 34:6-7 ರಲ್ಲಿ ದೇವರು ತನ್ನ ಕುರಿತು ವರ್ಣಿಸಿಕೊಂಡಿರುವ ಪದಗಳಲ್ಲಿ ಇದು ಮೊದಲನೆಯ ಪದವಾಗಿದೆ. ದೇವರನ್ನು ಸತ್ಯವೇದದಾದ್ಯಂತ ಕನಿಕರವುಳ್ಳ ತಂದೆಯಾಗಿಯೂ ತಾಯಿಯಾಗಿಯೂ ವರ್ಣಿಸಲಾಗಿದೆ. ಆತನ ಕನಿಕರವು ಯೇಸು ಎಂಬ ವ್ಯಕ್ತಿಯಲ್ಲಿ ಮೂರ್ತರೂಪಗೊಂಡಿತು. #BibleProject #ಸತ್ಯವೇದ #ಕನಿಕರ