ಈ ಪುಸ್ತಕದಲ್ಲಿ “ಪ್ರಸಂಗಿ” ಎಂಬ ಸಂಶಯಾತ್ಮಕ ಧ್ವನಿಯನ್ನು ನಾವು ಕೇಳುತ್ತೇವೆ. ಜ್ಞಾನೋಕ್ತಿಯ ಪುಸ್ತಕದ ಪ್ರಕಾರ ಜೀವಿಸುವುದು ಯಾವಾಗಲೂ ಸಕಾರಾತ್ಮಕ ಫಲಿತಾಂಶಗಳನ್ನು ಉಂಟುಮಾಡುವುದಿಲ್ಲ ಎಂದು ಅವನು ಗಮನಿಸುತ್ತಾನೆ. ಕೆಲವೊಮ್ಮೆ ಜೀವನವು ಕಠಿಣವಾಗಿರುತ್ತದೆ ಮತ್ತು ವಿವರಿಸಲು ಅಸಾಧ್ಯವಾಗಿರುವಷ್ಟು ವಿಸ್ಮಯಕರವಾಗಿರುತ್ತದೆ. ಆ ಉದ್ವಿಗ್ನತೆಯೊಂದಿಗೆ ನೀವು ಹೇಗೆ ಜೀವಿಸುತ್ತೀರಿ, ಮತ್ತು ಅದರ ಜೊತೆ ಜ್ಞಾನವನ್ನು ಪಡೆಯುವುದಕ್ಕಾಗಿ ಇನ್ನೂ ಹೇಗೆ ಶ್ರಮಿಸುತ್ತೀರಿ? ಬೈಬಲಿನಲ್ಲಿ ಜ್ಞಾನದ ಕುರಿತಾಗಿರುವ ಪುಸ್ತಕಗಳಲ್ಲಿ ಪ್ರಸಂಗಿಯು ಎರಡನೆಯ ಪುಸ್ತಕವಾಗಿದೆ.
#BibleProject #ಸತ್ಯವೇದ #ಪ್ರಸಂಗಿಯಪುಸ್ತಕ