ಯೇಸು ಯಾರು?
ಸತ್ಯವೇದ ಅನುವಾದವನ್ನು ಆರಿಸಿಕೊಳ್ಳುವುದೇಗೆ
ನಮ್ಮಲ್ಲಿ ಅನೇಕ ಬೈಬಲ್ ಭಾಷಾಂತರಗಳು ಲಭ್ಯವಿವೆ. ಅವುಗಳಲ್ಲಿ ಉತ್ತಮವಾದುದು ಯಾವುದು? ಉತ್ತಮ ಭಾಷಾಂತರವನ್ನು ಆರಿಸಿಕೊಳ್ಳುವುದಾದರೂ ಹೇಗೆಂಬುದನ್ನು ತಿಳಿದುಕೊಳ್ಳಲು ನಮ್ಮ ಇತ್ತೀಚಿನ ಬೈಬಲ್ ಪ್ರಾಥಮಿಕ ವೀಡಿಯೊವನ್ನು ವೀಕ್ಷಿಸಿರಿ. #bibleproject #ಸತ್ಯವೇದ #nameofvideo
ಸತ್ಯವೇದದ ಅನುವಾದದ ಚರಿತ್ರೆ
ಮೊಟ್ಟಮೊದಲ ಬೈಬಲ್ ಭಾಷಾಂತರಗಳ ಬಗ್ಗೆ ನೀವು ಎಂದಾದರೂ ಆಲೋಚಿಸಿದ್ದೀರಾ? ಬೈಬಲ್ ಭಾಷಾಂತರಗಳ ಚರಿತ್ರೆಯ ಕುರಿತಾದ ಕಿರು ಪರಿಚಯಕ್ಕಾಗಿ ನಮ್ಮ ಇತ್ತೀಚಿನ ಬೈಬಲ್ ಪ್ರಾಥಮಿಕ ವೀಡಿಯೊವನ್ನು ವೀಕ್ಷಿಸಿರಿ. #bibleproject #ಸತ್ಯವೇದ #nameofvideo
ದೇವರು
ಬೈಬಲಿನಲ್ಲಿ ವರ್ಣಿಸಲಾಗಿರುವ ದೇವರನ್ನು ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭದ ಕಾರ್ಯವಲ್ಲ, ಆದರೆ ನಮಗೆ ಯಾವುದನ್ನು ಅರ್ಥಮಾಡಿಕೊಳ್ಳಲು ಆಗುವುದಿಲ್ಲವೋ ಆ ವಿಷಯವು ಏನೆಂಬುದನ್ನು ನಾವು ಚೆನ್ನಾಗಿ ಅರ್ಥಮಾಡಿಕೊಂಡರೆ ಹೇಗಿರುತ್ತದೆ? ಈ ವೀಡಿಯೊದಲ್ಲಿ, ಬೈಬಲಿನ ಕಥೆಯಲ್ಲಿ ವಿವರಿಸಲಾಗಿರುವ ದೇವರ ಸಂಕೀರ್ಣವಾದ ಸ್ವರೂಪವನ್ನು ಮತ್ತು (ಆಶ್ಚರ್ಯಕರವಾಗಿ!) ಇದೆಲ್ಲವೂ ಯೇಸುವಿನ ಕಡೆಗೆ ನಡೆಸುತ್ತದೆ ಎಂಬುದನ್ನು ನಾವು ಕಲಿತುಕೊಳ್ಳುತ್ತೇವೆ. #BibleProject #ಸತ್ಯವೇದ #ದೇವರು
ಸೆರೆವಾಸ
ಇಡೀ ಬೈಬಲಿನ ಕಥೆಗೆ ಅತಿಮುಖ್ಯವಾಗಿರುವ ವಿಷಯಗಳ ಪೈಕಿ ಸೆರೆವಾಸವು ಕೂಡ ಒಂದು ಪ್ರಮುಖ ವಿಷಯವಾಗಿದೆ, ಆದರೂ ಅದನ್ನು ಅನೇಕವೇಳೆ ಕಡೆಗಣಿಸಲಾಗಿದೆ. ಈ ವೀಡಿಯೊದಲ್ಲಿ, ಇಸ್ರಾಯೇಲರು ಬಾಬಿಲೋನಿಗೆ ಸೆರೆವಾಸಕ್ಕೆ ಹೋದದ್ದು ಏದೇನ್ ತೋಟದಿಂದ ದೊಬ್ಬಲ್ಪಟ್ಟು ಇಡೀ ಮಾನವಕುಲವು ಸೆರೆವಾಸಕ್ಕೆ ಹೋದದ್ದರ ಚಿತ್ರಣವಾಗಿದೆ ಎಂಬುದನ್ನು ನಾವು ನೋಡಿಕೊಳ್ಳುತ್ತೇವೆ. ನೀವು ಊಹಿಸುತ್ತಿರುವ ಪ್ರಕಾರವೇ, ಯೇಸುವೇ ಮನೆಗೆ ಮರಳಿ ಬರುವ ಮಾರ್ಗವನ್ನು ತೆರೆಯುತ್ತಾನೆ. #BibleProject #ಸತ್ಯವೇದ #ಸೆರೆವಾಸ
ಬೈಬಲ್ ಅನ್ನು ಹೇಗೆ ಓದಬೇಕು: ಸಾಹಿತ್ಯ ಶೈಲಿಗಳು
ಬೈಬಲ್ ಅನ್ನು ಬುದ್ಧಿವಂತಿಕೆಯಿಂದ ಓದುವುದಕ್ಕಾಗಿ ಬೈಬಲ್ನ ಲೇಖಕರು ಬಳಸಿರುವ ಪ್ರಾಚೀನ ಸಾಹಿತ್ಯ ಶೈಲಿಗಳ ಬಗ್ಗೆ ನಾವು ಕಲಿತುಕೊಳ್ಳಬೇಕಾದದ್ದು ಅನಿವಾರ್ಯ. ಈ ಲೇಖಕರು ತಮ್ಮ ಆಲೋಚನೆಗಳನ್ನು ಮತ್ತು ಹೇಳಿಕೆಗಳನ್ನು ವಿವಿಧ ರೀತಿಯ ಸಾಹಿತ್ಯದ ಮೂಲಕ ವ್ಯಕ್ತಪಡಿಸಿದ್ದಾರೆ, ನಾವು ಅವರ ಸಂದೇಶಗಳನ್ನು ಅವರ ಷರತ್ತಿನ ಪ್ರಕಾರವೇ ಕೇಳುವುದಕ್ಕಾಗುವಂತೆ ಅವುಗಳನ್ನು ತಿಳಿದುಕೊಳ್ಳುವುದು ಏಕೆ ಮುಖ್ಯ ಎಂಬುದನ್ನು ಈ ವೀಡಿಯೊ ವಿವರಿಸುತ್ತದೆ. #BibleProject #ಸತ್ಯವೇದ #ಸಾಹಿತ್ಯ ಶೈಲಿಗಳು
ಬೈಬಲ್ ಅನ್ನು ಹೇಗೆ ಓದಬೇಕು: ಸತ್ಯವೇದದ ಕಥೆ
ಈ ವೀಡಿಯೊದಲ್ಲಿ ನಾವು ಬೈಬಲ್ನ ಇಡೀ ಕಥೆಯನ್ನು ನಿರ್ಣಾಯಕ ತೀರ್ಮಾನಗಳನ್ನು ತೆಗೆದುಕೊಳ್ಳುವಂಥ ಒಂದು ಸರಮಾಲೆಯನ್ನಾಗಿ ಸಂಕ್ಷಿಪ್ತವಾದ ರೀತಿಯಲ್ಲಿ ವಿವರಿಸುತ್ತವೆ. ಇಡೀ ಮಾನವಕುಲ, ಅನಂತರ ಇಸ್ರಾಯೇಲ್ಯರು, ಒಳ್ಳೆಯದು ಮತ್ತು ಕೆಟ್ಟದ್ದನ್ನು ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುವುದು ಮತ್ತು ಬಾಬಿಲೋನಿನಲ್ಲಿ ಅಂತ್ಯ ಕಾಣುವುದು. ಅವರ ನಂತರ ಯೇಸು ಬರುತ್ತಾನೆ, ಆತನು ನೂತನ ಸೃಷ್ಟಿಗೆ ದಾರಿ ತೆರೆಯುವಂಥ ವಿಭಿನ್ನ ಮಾರ್ಗವನ್ನು ಆರಿಸಿಕೊಳ್ಳುತ್ತಾನೆ. #BibleProject #ಸತ್ಯವೇದ #ಸತ್ಯವೇದದ ಕಥೆ
ಬೈಬಲ್ ಅನ್ನು ಹೇಗೆ ಓದಬೇಕು: ಬೈಬಲ್ ಎಂದರೇನು?
ಇದು ಬೈಬಲ್‌ನ ಮೂಲ, ವಿಷಯ ಮತ್ತು ಉದ್ದೇಶವನ್ನು ವಿವರಿಸುತ್ತಾ ಮುಂದುವರೆಯುತ್ತಿರುವ ಸರಣಿಯ 1 ನೇ ವಿಭಾಗವಾಗಿದೆ. ಬೈಬಲ್ ಅನ್ನು ಪರಿಣಾಮಕಾರವಾದ ರೀತಿಯಲ್ಲಿ ಓದಲು ಅಗತ್ಯವಾಗಿರುವ ಕೆಲವು ಮೂಲಭೂತ ಕೌಶಲ್ಯಗಳನ್ನು ಇದರಲ್ಲಿ ನಿಮಗೆ ಪರಿಚಯ ಮಾಡಿಕೊಡಲಾಗುತ್ತದೆ. #BibleProject #ಸತ್ಯವೇದ #ಬೈಬಲ್‌ಎಂದರೇನು?
ನೂತನ ಮನುಷ್ಯರು
ಬೈಬಲ್ನ ಆರಂಭಿಕ ಪುಟಗಳಲ್ಲಿ, ದೇವರು ತನ್ನ ಪರವಾಗಿ ಲೋಕವನ್ನು ಆಳಲು ಮನುಷ್ಯರನ್ನು ನೇಮಿಸುತ್ತಾನೆ. ಆದರೆ ಅವರು ತಿರುಗಿ ಬಿದ್ದಾಗ, ಬೈಬಲ್ನ ಕಥೆಯು ಶಾಶ್ವತವಾಗಿ ದೇವರಿಗೆ ನಂಬಿಗಸ್ತ ಪಾಲುದಾರರಾಗಿರುವ ಹೊಸ ಮಾನವಕುಲದ ಹುಡುಕಾಟದ ಕಡೆಗೆ ನಮ್ಮನ್ನು ಕೊಂಡೊಯ್ಯುತ್ತದೆ. ಇದು ಯೇಸುವಿಗೆ ಕಡೆಗೆ ನಡೆಸುವ ಬೈಬಲ್ನ ಕಥೆಯಲ್ಲಿನ ಕಥಾವಸ್ತುವಿನ ಸಂಘರ್ಷವಾಗಿದೆ ಮತ್ತು ಆತ್ಮಿಕ ಜೀವಿಯ ಕುರಿತಾಗಿರುವ ನಮ್ಮ ಸರಣಿಮಾಲೆಯ ಈ ಕೊನೆಯ ವೀಡಿಯೊದಲ್ಲಿ ನಾವು ಅದನ್ನು ಚರ್ಚಿಸುತ್ತೇವೆ. #BibleProject #ಸತ್ಯವೇದ #ನೂತನ ಮನುಷ್ಯರು
ಸೈತಾನನು ಮತ್ತು ದೆವ್ವಗಳು
ಬೈಬಲ್ನ ಕಥೆಯು ಮನುಷ್ಯರಂತೆಯೇ ತಮ್ಮ ಸೃಷ್ಟಿಕರ್ತನ ವಿರುದ್ಧ ತಿರುಗಿಬಿದ್ದ ಜೀವಿಗಳಿಂದ ತುಂಬಿರುವ ಆತ್ಮಿಕ ಜಗತ್ತನ್ನು ಸಾದರಪಡಿಸುತ್ತದೆ. ಮನಸೆಳೆಯುವ ಬಹಳಷ್ಟು ಕಾರಣಗಳ ನಿಮಿತ್ತವಾಗಿ, ಬೈಬಲನ್ನು ಬಹಳ ತಪ್ಪಾಗಿ ಅರ್ಥಮಾಡಿಕೊಂಡಿರುವುದರ ಮೇಲೆ ತಿರುಗಿಬಿದ್ದ ಈ ಆತ್ಮಿಕ ಜೀವಿಗಳ ಕುರಿತಾದ ನಮ್ಮ ಆಧುನಿಕ ಪರಿಕಲ್ಪನೆಗಳು ಆಧರಿಸಿವೆ. ಆದ್ದರಿಂದ ನಾವು ಆದಿಕಾಂಡ ಪುಸ್ತಕಕ್ಕೆ ಮರಳಿ ಹೋಗಿ ಬೈಬಲ್ನ ಕಥೆಯಲ್ಲಿರುವ ಆತ್ಮಿಕವಾದ ದುಷ್ಟ ಶಕ್ತಿಗಳ ಬಗ್ಗೆ ಕಲಿಯುವುದಕ್ಕೆ ಮತ್ತೇ ಪ್ರಾರಂಭಿಸೋಣ. #BibleProject #ಸತ್ಯವೇದ #ಸೈತಾನನು ಮತ್ತು ದೆವ್ವಗಳು
ಕರ್ತನ ದೂತನು
ಕರ್ತನ ದೂತನು ಹೀಬ್ರೂ ಪವಿತ್ರಗ್ರಂಥಗಳಲ್ಲಿರುವ ಆತ್ಮಿಕ ಜೀವಿಗಳ ಪೈಕಿ ಅತ್ಯಂತ ಆಕರ್ಷಕವಾದ ಜೀವಿಯಾಗಿದ್ದಾನೆ. ಈ ವ್ಯಕ್ತಿಯು ಕಾಣಿಸಿಕೊಂಡಾಗಲೆಲ್ಲಾ, ಆತನನ್ನು ದೇವರಂತೆಯೂ ವರ್ಣಿಸಲಾಗಿದೆ, ಆದರೆ ದೇವರು ಕಳುಹಿಸಿದ ದೇವದೂತನೆಂದು ಸಹ ವರ್ಣಿಸಲಾಗಿದೆ. ಈ ವೀಡಿಯೊದಲ್ಲಿ ನಾವು ಈ ವಿರೋಧಭಾಸದಂತಿರುವ ಪಾತ್ರವನ್ನು ಚರ್ಚಿಸುತ್ತೇವೆ ಮತ್ತು ಹೊಸ ಒಡಂಬಡಿಕೆಯಲ್ಲಿ ಯೇಸುವಿನ ಕುರಿತು ಮಾಡಲಾಗುವ ಭವ್ಯವಾದ ನಿರೂಪಣೆಗಳಿಗೆ ಆತನು ನಮ್ಮನ್ನು ಹೇಗೆ ಸಿದ್ಧಪಡಿಸುತ್ತಾನೆ ಎಂಬುದನ್ನು ತಿಳಿಯಪಡಿಸುತ್ತೇವೆ! #BibleProject #ಸತ್ಯವೇದ #ಕರ್ತನ ದೂತನು