ದೀರ್ಘಶಾಂತನು

ದೇವರು ದೀರ್ಘಶಾಂತನು ಎಂದು ಹೇಳುವುದರಲ್ಲಿರುವ ಅರ್ಥವೇನು? ಸತ್ಯವೇದದಲ್ಲಿ ದೇವರ ಕೋಪವು ಮನುಷ್ಯರ ದುಷ್ಟತನಕ್ಕೆ ವಿರೋಧವಾಗಿ ಆತನ ನ್ಯಾಯದಿಂದಲೂ ಪ್ರೀತಿಯಿಂದಲೂ ಹೊರಬರುವ ನ್ಯಾಯಯುತವಾದ ಸ್ಪಂದನವಾಗಿದೆ. ಈ ವೀಡಿಯೊದಲ್ಲಿ, ನಾವು ಸತ್ಯವೇದದ ಕಥೆಯಲ್ಲಿರುವ ದೇವರ ಕೋಪವನ್ನೂ ನ್ಯಾಯವನ್ನೂ ಕೂಲಂಕುಷವಾಗಿ ಕಲಿಯುತ್ತಾ ಅದು ನಮ್ಮನ್ನು ಯೇಸುವಿನತ್ತ ಹೇಗೆ ಕೊಂಡೊಯ್ಯುತ್ತದೆ ಎಂಬುದನ್ನು ನೋಡಿಕೊಳ್ಳೋಣ. #BibleProject #ಸತ್ಯವೇದ #ದ…ಹೆಚ್ಚು ಓದು

ಕೃಪೆ

ಸತ್ಯವೇದದ ದೇವರು ಕೃಪೆಯುಳ್ಳವನು ಎಂದು ಹೇಳುವುದರಲ್ಲಿರುವ ಅರ್ಥವೇನು? ಈ ವೀಡಿಯೊದಲ್ಲಿ, ಕೃಪೆಗಾಗಿ ಬಳಸಿರುವ ಇಬ್ರಿಯ ಪದಗಳನ್ನು ನೋಡಿಕೊಂಡು, ನಾವು ದೇವರನ್ನು ನೋಡುವ ನಮ್ಮ ದೃಷ್ಟಿಕೋನದಲ್ಲಿ ಅದು ಎಷ್ಟು ಆಳವಾದ ಪರಿಣಾಮಗಳನ್ನು ಬೀರುವಂಥ ಅಮೂಲ್ಯವಾದ ವಿಚಾರವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳೋಣ. ಕೃಪೆಯೆಂಬ ಪದಕ್ಕೆ ಸತ್ಯವೇದದಲ್ಲಿರುವ ಅರ್ಥವನ್ನು ನೋಡಿಕೊಂಡು, ದೇವರು ಕೃಪಾಪೂರ್ಣನು ಎಂಬುದನ್ನು ಅರ್ಥಮಾಡಿಕೊಂಡಾಗ, ಅರ್ಹತೆಯಿಲ್ಲದ ಜನರಿಗೂ ಉದಾರವಾಗಿ ದಾನಗಳನ್ನು ಕೊಡಲು ಇಷ್ಟಪಡುವ ದೇವರನ್ನು ನಾವು ಕೊಂಡುಕೊಳ್ಳಬಹುದು. #BibleProject #ಸತ್ಯವೇದ #ಕೃಪೆ

ಕನಿಕರ

ಕನಿಕರ ಎಂಬುದು ತುಂಬಾ ಭಾವನಾತ್ಮಕವಾದ ಪದವಾಗಿದೆ. ತಂದೆತಾಯಿಗೂ ಅವರ ಮಗುವಿಗೂ ನಡುವೆಯಿರುವ ಬಲವಾದ ಸಂಬಂಧವನ್ನು ವ್ಯಕ್ತಪಡಿಸಲು ಈ ಪದವನ್ನು ಬಳಸುತ್ತಾರೆ. ಈ ವೀಡಿಯೊದಲ್ಲಿ, ಈ ಅಮೂಲ್ಯವಾದ ಇಬ್ರಿಯ ಪದದ ಕುರಿತು ನಾವು ನೋಡಿಕೊಳ್ಳೋಣ. ವಿಮೋಚನಕಾಂಡ 34:6-7 ರಲ್ಲಿ ದೇವರು ತನ್ನ ಕುರಿತು ವರ್ಣಿಸಿಕೊಂಡಿರುವ ಪದಗಳಲ್ಲಿ ಇದು ಮೊದಲನೆಯ ಪದವಾಗಿದೆ. ದೇವರನ್ನು ಸತ್ಯವೇದದಾದ್ಯಂತ ಕನಿಕರವುಳ್ಳ ತಂದೆಯಾಗಿಯೂ ತಾಯಿಯಾಗಿಯೂ ವರ್ಣಿಸಲಾಗಿದೆ. ಆತನ ಕನಿಕರವು ಯೇಸು ಎಂಬ ವ್ಯಕ್ತಿಯಲ್ಲಿ ಮೂರ್ತರೂಪಗೊಂಡಿತು. #BibleProject #ಸತ್ಯವೇದ #ಕನಿಕರ

ಸೆರೆವಾಸದ ಮಾರ್ಗ

#BibleProject #ಸತ್ಯವೇದ #ಸೆರೆವಾಸದಮಾರ್ಗ ಯೇಸುವಿನ ಹಿಂಬಾಲಕರು ದೇವರ ರಾಜ್ಯಕ್ಕೆ ಪೂರ್ಣ ನಿಷ್ಠೆಯುಳ್ಳವರು ಆಗಿರಬೇಕಾದರೆ, ಅವರ ಕಾಲದ ಸರ್ಕಾರಗಳೊಂದಿಗೆ ಆಡಳಿತದ ವ್ಯವಸ್ಥೆಯೊಂದಿಗೆ ಅವರ ಸಂಬಂಧ ಹೇಗಿರಬೇಕು? ಈ ಬಿಕ್ಕಟ್ಟನ್ನು ನಿವಾರಿಸಲು ಬಾಬಿಲೋನಿನ ಸೆರೆವಾಸದಲ್ಲಿದ್ದ ದಾನಿಯೇಲನ ಮತ್ತು ಅವನ ಸ್ನೇಹಿತರ ಅನುಭವವು ನಮಗೆ ಹೇಗೆ ಜ್ಞಾನವನ್ನು ಕೊಡುತ್ತದೆ ಎಂಬುದನ್ನು ಈ ವೀಡಿಯೊದಲ್ಲಿ ನಾವು ನೋಡಿಕೊಳ್ಳುತ್ತೇವೆ. 21 ನೇ ಶತಮಾನದಲ್ಲಿ ಯೇಸುವನ್ನು ಹಿಂಬಾಲಿಸುವುದು ಎಂದರೆ ಸೆರೆವಾಸದ ಮಾರ್ಗವನ್ನು ಕಲಿತುಕೊಳ್ಳುವುದಾಗಿದೆ.

ಸಾರಾಂಶ: 1-2 ಪೂರ್ವಕಾಲವೃತ್ತಾಂತ

#BibleProject #ಸತ್ಯವೇದ #ಪೂರ್ವಕಾಲವೃತ್ತಾಂತ 1-2 ಪೂರ್ವಕಾಲವೃತ್ತಾಂತ ಪುಸ್ತಕಗಳ ಪುಸ್ತಕದ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ಪೂರ್ವಕಾಲವೃತ್ತಾಂತ ಪುಸ್ತಕವು ಇಡೀ ಹಳೆ ಒಡಂಬಡಿಕೆಯ ಕಥೆಯನ್ನು ಪುನಃ ಹೇಳುತ್ತದೆ, ಮೆಸ್ಸಿಯ ರಾಜನ ಮತ್ತು ಪುನಃಸ್ಥಾಪಿಸಲ್ಪಡುವ ದೇವಾಲಯದ ಕುರಿತಾದ ಭವಿಷ್ಯದ ನಿರೀಕ್ಷೆಯನ್ನು ಎತ್ತಿ ತೋರಿಸುತ್ತದೆ.

ಸಾರಾಂಶ: ದಾನಿಯೇಲ

ದಾನಿಯೇಲನ ಪುಸ್ತಕದ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ದಾನಿಯೇಲನ ಕಥೆಯು ಬಾಬಿಲೋನಿನಲ್ಲಿನ ಸೆರೆವಾಸದ ಹೊರತಾಗಿಯೂ ನಂಬಿಗಸ್ತಿಕೆ ಉಳ್ಳವರಾಗಿರಲು ಪ್ರೇರೇಪಿಸುತ್ತದೆ. ಅವನ ದರ್ಶನಗಳು ದೇವರು ಎಲ್ಲಾ ದೇಶಗಳನ್ನು ತನ್ನ ಆಳ್ವಿಕೆಯಡಿಗೆ ತರುತ್ತಾನೆ ಎಂಬ ನಿರೀಕ್ಷೆಯನ್ನು ಮೂಡಿಸುತ್ತದೆ. #BibleProject #ಸತ್ಯವೇದ #ದಾನಿಯೇಲ

ಸಾರಾಂಶ: ಎಸ್ತೇರಳು

ಎಸ್ತೇರಳ ಪುಸ್ತಕದ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ಎಸ್ತೇರಳ ಪುಸ್ತಕದಲ್ಲಿ, ದೇವರ ಬಗ್ಗೆಯಾಗಲಿ ಅಥವಾ ಅತನ ಕ್ರಿಯೆಯ ಬಗ್ಗೆಯಾಗಲಿ ಯಾವುದೇ ಸ್ಪಷ್ಟವಾದ ಪ್ರಸ್ತಾಪವಿಲ್ಲ, ಆದರೂ ತನ್ನ ಜನರನ್ನು ಒಂದು ವಿನಾಶದಿಂದ ಬಿಡಿಸಲು ದೇವರು ಸೆರೆವಾಸದಲ್ಲಿದ್ದ ಇಬ್ಬರು ಇಸ್ರಾಯೇಲ್ಯರನ್ನು ಉಪಯೋಗಿಸುತ್ತಾನೆ. #BibleProject #ಸತ್ಯವೇದ #ಎಸ್ತೇರಳು

ಸಾರಾಂಶ: ಎಜ್ರ-ನೆಹೆಮೀಯ

#BibleProject #ಸತ್ಯವೇದ #ಎಜ್ರ-ನೆಹೆಮೀಯ

ಸಾರಾಂಶ: ಪ್ರಸಂಗಿ

ಪ್ರಸಂಗಿ ಪುಸ್ತಕದ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ಈ ಪುಸ್ತಕವು ಮರಣವನ್ನು, ದುರದೃಷ್ಟಕರ ಘಟನೆಯನ್ನು ಮತ್ತು ದೇವರ ಒಳ್ಳೆಯತನದಲ್ಲಿ ಇಟ್ಟಿರುವ ನಿಷ್ಕಪಟವಾದ ನಂಬಿಕೆಗೆ ಅವುಗಳು ಒಡ್ಡುವ ಸವಾಲುಗಳನ್ನು ಎದುರಿಸಲು ನಮ್ಮನ್ನು ಒತ್ತಾಯಿಸುತ್ತದೆ. #BibleProject #ಸತ್ಯವೇದ #ಪ್ರಸಂಗಿ

ಸಾರಾಂಶ: ಪ್ರಲಾಪಗಳು

ಪ್ರಲಾಪಗಳ ಪುಸ್ತಕದ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ಪ್ರಲಾಪಗಳ ಪುಸ್ತಕವು ಬಾಬಿಲೋನಿನವರು ಯೆರೂಸಲೇಮನ್ನು ನಾಶಮಾಡಿದ ನಂತರ ಅದರ ಪರವಾಗಿ ಮಾಡಲಾದ ಶೋಕಾಚರಣೆಯ ಐದು ಕವನಗಳ ಸಂಗ್ರಹವಾಗಿದೆ. #BibleProject #ಸತ್ಯವೇದ #ಪ್ರಲಾಪಗಳು

ಸಾರಾಂಶ: ರೂತಳು

ರೂತಳ ಪುಸ್ತಕದ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ರೂತಳ ಪುಸ್ತಕದಲ್ಲಿ, ಇಸ್ರಾಯೇಲ್ಯರ ಒಂದು ಕುಟುಂಬವು ಘನಘೋರವಾದ ನಷ್ಟವನ್ನು ಅನುಭವಿಸಿತು, ದೇವರು ದಾವೀದನ ಕುಟುಂಬದಲ್ಲಿ ಪುನಃಸ್ಥಾಪನೆಯನ್ನು ಉಂಟುಮಾಡಲು ಇಸ್ರಾಯೇಲ್ಯಳು ಅಲ್ಲದ ಸ್ತ್ರೀಯ ನಂಬಿಗಸ್ತಿಕೆಯನ್ನು ಉಪಯೋಗಿಸುತ್ತಾನೆ. #BibleProject #ಸತ್ಯವೇದ #ರೂತಳು