ಸೆರೆವಾಸ
ಬೈಬಲ್ ಅನ್ನು ಹೇಗೆ ಓದಬೇಕು: ಸಾಹಿತ್ಯ ಶೈಲಿಗಳು
ಬೈಬಲ್ ಅನ್ನು ಬುದ್ಧಿವಂತಿಕೆಯಿಂದ ಓದುವುದಕ್ಕಾಗಿ ಬೈಬಲ್ನ ಲೇಖಕರು ಬಳಸಿರುವ ಪ್ರಾಚೀನ ಸಾಹಿತ್ಯ ಶೈಲಿಗಳ ಬಗ್ಗೆ ನಾವು ಕಲಿತುಕೊಳ್ಳಬೇಕಾದದ್ದು ಅನಿವಾರ್ಯ. ಈ ಲೇಖಕರು ತಮ್ಮ ಆಲೋಚನೆಗಳನ್ನು ಮತ್ತು ಹೇಳಿಕೆಗಳನ್ನು ವಿವಿಧ ರೀತಿಯ ಸಾಹಿತ್ಯದ ಮೂಲಕ ವ್ಯಕ್ತಪಡಿಸಿದ್ದಾರೆ, ನಾವು ಅವರ ಸಂದೇಶಗಳನ್ನು ಅವರ ಷರತ್ತಿನ ಪ್ರಕಾರವೇ ಕೇಳುವುದಕ್ಕಾಗುವಂತೆ ಅವುಗಳನ್ನು ತಿಳಿದುಕೊಳ್ಳುವುದು ಏಕೆ ಮುಖ್ಯ ಎಂಬುದನ್ನು ಈ ವೀಡಿಯೊ ವಿವರಿಸುತ್ತದೆ. #BibleProject #ಸತ್ಯವೇದ #ಸಾಹಿತ್ಯ ಶೈಲಿಗಳು
ಬೈಬಲ್ ಅನ್ನು ಹೇಗೆ ಓದಬೇಕು: ಸತ್ಯವೇದದ ಕಥೆ
ಈ ವೀಡಿಯೊದಲ್ಲಿ ನಾವು ಬೈಬಲ್ನ ಇಡೀ ಕಥೆಯನ್ನು ನಿರ್ಣಾಯಕ ತೀರ್ಮಾನಗಳನ್ನು ತೆಗೆದುಕೊಳ್ಳುವಂಥ ಒಂದು ಸರಮಾಲೆಯನ್ನಾಗಿ ಸಂಕ್ಷಿಪ್ತವಾದ ರೀತಿಯಲ್ಲಿ ವಿವರಿಸುತ್ತವೆ. ಇಡೀ ಮಾನವಕುಲ, ಅನಂತರ ಇಸ್ರಾಯೇಲ್ಯರು, ಒಳ್ಳೆಯದು ಮತ್ತು ಕೆಟ್ಟದ್ದನ್ನು ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುವುದು ಮತ್ತು ಬಾಬಿಲೋನಿನಲ್ಲಿ ಅಂತ್ಯ ಕಾಣುವುದು. ಅವರ ನಂತರ ಯೇಸು ಬರುತ್ತಾನೆ, ಆತನು ನೂತನ ಸೃಷ್ಟಿಗೆ ದಾರಿ ತೆರೆಯುವಂಥ ವಿಭಿನ್ನ ಮಾರ್ಗವನ್ನು ಆರಿಸಿಕೊಳ್ಳುತ್ತಾನೆ. #BibleProject #ಸತ್ಯವೇದ #ಸತ್ಯವೇದದ ಕಥೆ
ಬೈಬಲ್ ಅನ್ನು ಹೇಗೆ ಓದಬೇಕು: ಬೈಬಲ್ ಎಂದರೇನು?
ಇದು ಬೈಬಲ್‌ನ ಮೂಲ, ವಿಷಯ ಮತ್ತು ಉದ್ದೇಶವನ್ನು ವಿವರಿಸುತ್ತಾ ಮುಂದುವರೆಯುತ್ತಿರುವ ಸರಣಿಯ 1 ನೇ ವಿಭಾಗವಾಗಿದೆ. ಬೈಬಲ್ ಅನ್ನು ಪರಿಣಾಮಕಾರವಾದ ರೀತಿಯಲ್ಲಿ ಓದಲು ಅಗತ್ಯವಾಗಿರುವ ಕೆಲವು ಮೂಲಭೂತ ಕೌಶಲ್ಯಗಳನ್ನು ಇದರಲ್ಲಿ ನಿಮಗೆ ಪರಿಚಯ ಮಾಡಿಕೊಡಲಾಗುತ್ತದೆ. #BibleProject #ಸತ್ಯವೇದ #ಬೈಬಲ್‌ಎಂದರೇನು?
ನೂತನ ಮನುಷ್ಯರು
ಬೈಬಲ್ನ ಆರಂಭಿಕ ಪುಟಗಳಲ್ಲಿ, ದೇವರು ತನ್ನ ಪರವಾಗಿ ಲೋಕವನ್ನು ಆಳಲು ಮನುಷ್ಯರನ್ನು ನೇಮಿಸುತ್ತಾನೆ. ಆದರೆ ಅವರು ತಿರುಗಿ ಬಿದ್ದಾಗ, ಬೈಬಲ್ನ ಕಥೆಯು ಶಾಶ್ವತವಾಗಿ ದೇವರಿಗೆ ನಂಬಿಗಸ್ತ ಪಾಲುದಾರರಾಗಿರುವ ಹೊಸ ಮಾನವಕುಲದ ಹುಡುಕಾಟದ ಕಡೆಗೆ ನಮ್ಮನ್ನು ಕೊಂಡೊಯ್ಯುತ್ತದೆ. ಇದು ಯೇಸುವಿಗೆ ಕಡೆಗೆ ನಡೆಸುವ ಬೈಬಲ್ನ ಕಥೆಯಲ್ಲಿನ ಕಥಾವಸ್ತುವಿನ ಸಂಘರ್ಷವಾಗಿದೆ ಮತ್ತು ಆತ್ಮಿಕ ಜೀವಿಯ ಕುರಿತಾಗಿರುವ ನಮ್ಮ ಸರಣಿಮಾಲೆಯ ಈ ಕೊನೆಯ ವೀಡಿಯೊದಲ್ಲಿ ನಾವು ಅದನ್ನು ಚರ್ಚಿಸುತ್ತೇವೆ. #BibleProject #ಸತ್ಯವೇದ #ನೂತನ ಮನುಷ್ಯರು
ಸೈತಾನನು ಮತ್ತು ದೆವ್ವಗಳು
ಬೈಬಲ್ನ ಕಥೆಯು ಮನುಷ್ಯರಂತೆಯೇ ತಮ್ಮ ಸೃಷ್ಟಿಕರ್ತನ ವಿರುದ್ಧ ತಿರುಗಿಬಿದ್ದ ಜೀವಿಗಳಿಂದ ತುಂಬಿರುವ ಆತ್ಮಿಕ ಜಗತ್ತನ್ನು ಸಾದರಪಡಿಸುತ್ತದೆ. ಮನಸೆಳೆಯುವ ಬಹಳಷ್ಟು ಕಾರಣಗಳ ನಿಮಿತ್ತವಾಗಿ, ಬೈಬಲನ್ನು ಬಹಳ ತಪ್ಪಾಗಿ ಅರ್ಥಮಾಡಿಕೊಂಡಿರುವುದರ ಮೇಲೆ ತಿರುಗಿಬಿದ್ದ ಈ ಆತ್ಮಿಕ ಜೀವಿಗಳ ಕುರಿತಾದ ನಮ್ಮ ಆಧುನಿಕ ಪರಿಕಲ್ಪನೆಗಳು ಆಧರಿಸಿವೆ. ಆದ್ದರಿಂದ ನಾವು ಆದಿಕಾಂಡ ಪುಸ್ತಕಕ್ಕೆ ಮರಳಿ ಹೋಗಿ ಬೈಬಲ್ನ ಕಥೆಯಲ್ಲಿರುವ ಆತ್ಮಿಕವಾದ ದುಷ್ಟ ಶಕ್ತಿಗಳ ಬಗ್ಗೆ ಕಲಿಯುವುದಕ್ಕೆ ಮತ್ತೇ ಪ್ರಾರಂಭಿಸೋಣ. #BibleProject #ಸತ್ಯವೇದ #ಸೈತಾನನು ಮತ್ತು ದೆವ್ವಗಳು
ಕರ್ತನ ದೂತನು
ಕರ್ತನ ದೂತನು ಹೀಬ್ರೂ ಪವಿತ್ರಗ್ರಂಥಗಳಲ್ಲಿರುವ ಆತ್ಮಿಕ ಜೀವಿಗಳ ಪೈಕಿ ಅತ್ಯಂತ ಆಕರ್ಷಕವಾದ ಜೀವಿಯಾಗಿದ್ದಾನೆ. ಈ ವ್ಯಕ್ತಿಯು ಕಾಣಿಸಿಕೊಂಡಾಗಲೆಲ್ಲಾ, ಆತನನ್ನು ದೇವರಂತೆಯೂ ವರ್ಣಿಸಲಾಗಿದೆ, ಆದರೆ ದೇವರು ಕಳುಹಿಸಿದ ದೇವದೂತನೆಂದು ಸಹ ವರ್ಣಿಸಲಾಗಿದೆ. ಈ ವೀಡಿಯೊದಲ್ಲಿ ನಾವು ಈ ವಿರೋಧಭಾಸದಂತಿರುವ ಪಾತ್ರವನ್ನು ಚರ್ಚಿಸುತ್ತೇವೆ ಮತ್ತು ಹೊಸ ಒಡಂಬಡಿಕೆಯಲ್ಲಿ ಯೇಸುವಿನ ಕುರಿತು ಮಾಡಲಾಗುವ ಭವ್ಯವಾದ ನಿರೂಪಣೆಗಳಿಗೆ ಆತನು ನಮ್ಮನ್ನು ಹೇಗೆ ಸಿದ್ಧಪಡಿಸುತ್ತಾನೆ ಎಂಬುದನ್ನು ತಿಳಿಯಪಡಿಸುತ್ತೇವೆ! #BibleProject #ಸತ್ಯವೇದ #ಕರ್ತನ ದೂತನು
ದೇವದೂತರು ಮತ್ತು ಕೆರೂಬಿ
ಬೈಬಲ್ನಲ್ಲಿರುವ ದೇವದೂತರಿಗೆ ರೆಕ್ಕೆಗಳಿಲ್ಲ ಅಥವಾ ಕೆರೂಬಿಗಳು ಮುದ್ದಾದ, ದುಂಡುದುಂಡಾಗಿರುವ ಶಿಶುಗಳಲ್ಲ ಎಂಬುದು ನಿಮಗೆ ತಿಳಿದಿದೆಯೇ? ಈ ವೀಡಿಯೊದಲ್ಲಿ, ಅವರು ಯಾರೆಂಬುದನ್ನೂ ಬೈಬಲ್ ಕಥೆಯಲ್ಲಿ ಅವರು ಯಾವ ಪಾತ್ರವನ್ನು ವಹಿಸುತ್ತಾರೆ ಎಂಬುದನ್ನೂ ಅರ್ಥಮಾಡಿಕೊಳ್ಳಲು ಈ ಆತ್ಮಿಕ ಜೀವಿಗಳಿಗೆ ಬೈಬಲಿನಲ್ಲಿ ಕೊಡಲ್ಪಟ್ಟಿರುವ ಚಿತ್ರಣಗಳನ್ನು ನಾವು ಚರ್ಚಿಸುತ್ತೇವೆ. #BibleProject #ಸತ್ಯವೇದ #ದೇವದೂತರು ಮತ್ತು ಕೆರೂಬಿ
ದೈವಿಕ ಮಂಡಳಿ
ಭೂಮಿಯ ಮೇಲಿರುವ ದೈವಿಕ ಆಡಳಿತ ಮಂಡಳಿ ಎಂದರೇನು? ಬಹುಶಃ ಆರಂಭಿಕರಿಗಾಗಿ, ಇದು ಭೂಮಿಯ ಮೇಲೆ ಇಲ್ಲದಿರಬಹುದು! ಬೈಬಲ್ನ ಈ ನುಡಿಗಟ್ಟು, ಪ್ರತಿಯೊಬ್ಬರೂ ತಿರುಗಿ ಬಿದ್ದು ಯೇಸುವಿನಿಂದ ಮಾತ್ರವೇ ಪರಿಹರಿಸಬಹುದಾದ ದೊಡ್ಡ ಸಮಸ್ಯೆಗಳು ಉಂಟಾಗುವವರೆಗೂ ಮನುಷ್ಯರ ಹಾಗೆಯೇ ಅಧಿಕಾರವುಳ್ಳವರಾಗಿರಲು ದೇವರು ಸೃಷ್ಟಿಸಿದ ಆತ್ಮಿಕ ಶಕ್ತಿಗಳ ಪರಿಕಲ್ಪನೆಯನ್ನು ವಿವರಿಸುತ್ತದೆ. ಆತ್ಮಿಕ ಜೀವಿಗಳ #BibleProject #ಸತ್ಯವೇದ #ದೈವಿಕ ಮಂಡಳಿ
ಎಲ್ಲೋಹಿಮ್
ಬೈಬಲ್ನ ಮೊದಲ ಪುಟಗಳಲ್ಲಿ, ದೇವರನ್ನು ಮತ್ತು ಮನುಷ್ಯರನ್ನು ಮುಖ್ಯ ಕಥಾಪಾತ್ರಗಳಾಗಿ ನಮಗೆ ಪರಿಚಯಿಸಲಾಗಿದೆ. ಆದರೆ ಬೈಬಲ್ನಾದ್ಯಂತ ಪ್ರಮುಖ ಪಾತ್ರ ನಿರ್ವಹಿಸುವ ಆತ್ಮಿಕ ಜೀವಿಗಳ ಪೂರ್ಣ ಪಾತ್ರವರ್ಗವೇ ಇದೆ, ಆದರೆ ಅವರು ಹೆಚ್ಚಾಗಿ ತೆರೆಮರೆಯಲ್ಲಿರುತ್ತಾರೆ. ಈ ವೀಡಿಯೊದಲ್ಲಿ, ನಾವು ಈ ಜೀವಿಗಳ ಬಗ್ಗೆ ಮತ್ತು ಅವುಗಳು ಬೈಬಲ್‌ನ ಏಕೀಕೃತ ಕಥೆಗೆ ಹೇಗೆ ಸರಿ ಹೊಂದುತ್ತವೆ ಎಂಬುದರ ಬಗ್ಗೆ ಚರ್ಚಿಸಲು ಪ್ರಾರಂಭಿಸೋಣ. #BibleProject #ಸತ್ಯವೇದ #ಎಲ್ಲೋಹಿಮ್
ಮನುಷ್ಯಕುಮಾರ
“ಕ್ರಿಸ್ತನು” ಎಂಬ ನಾಮಧೇಯವು ಯೇಸುವಿನ ಕೊನೆಯ ಹೆಸರಾಗಿದೆ ಅಥವಾ ಆತನು ತನಗೆ ತಾನೇ ಇಟ್ಟುಕೊಂಡಂಥ ನಾಮಧೇಯವಾಗಿದೆ ಎಂದು ನೀವು ಭಾವಿಸಿದರೆ, ಅದರ ಬಗ್ಗೆ ಪುನಃ ಯೋಚಿಸಿರಿ! ಯೇಸು ತನಗೆ ಹೆಚ್ಚಾಗಿ ಬಳಸಿಕೊಂಡಂಥ ನಾಮಧೇಯವು "ಮನುಷ್ಯಕುಮಾರ" ಎಂಬ ನಾಮಧೇಯವಾಗಿದೆ. ಈ ವೀಡಿಯೊದಲ್ಲಿ, ಕುತೂಹಲಕಾರಿಯಾದ ಈ ಪದಗುಚ್ಛದ ಅರ್ಥವನ್ನು ಕಲಿಯುತ್ತೇವೆ ಮತ್ತು ಅದು ಬೈಬಲಿನ ದೊಡ್ಡ ಕಥೆಯತ್ತ ನಮ್ಮನ್ನು ಹೇಗೆ ಸೆಳೆಯುತ್ತದೆ ಎಂಬುದನ್ನು ನಾವು ನೋಡಿಕೊಳ್ಳುತ್ತೇವೆ. #BibleProject #ಸತ್ಯವೇದ #ಮನುಷ್ಯಕುಮಾರ